ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ , ಮುಕ್ತಗಂಗೋತ್ರಿ , ಮೈಸೂರು

ಕರಾಮುವಿಯ ಉಗಮ ಮತ್ತು ಬೆಳವಣಿಗೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿ), ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕರಾಮುವಿಯು), 1992 ರಲ್ಲಿ ರಾಜ್ಯ ಶಾಸಕಾಂಗದ ಕಾಯಿದೆಯ ಮೂಲಕ ಸ್ಥಾಪಿಸಲಾದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದ್ದು 1 ನೇ ಜೂನ್ 1996 ರಿಂದ ವಿಶ್ವವಿದ್ಯಾನಿಲಯವು ಕಾರ್ಯರಂಭಗೊಂಡಿದೆ. ವಿಶ್ವವಿದ್ಯಾನಿಲಯವು ಸ್ಥಾಪನೆಯಾದಾಗಿನಿಂದ ಉನ್ನತ ಶಿಕ್ಷಣದ ರಾಷ್ಟ್ರೀಯ ಉದ್ದೇಶಗಳಾದ ಪ್ರವೇಶ , ಸಮಾನತೆ ,ಗುಣಮಟ್ಟ, ಲಾಭದಾಯಕತೆ ಮತ್ತು ಹೊಣೆಗಾರಿಕೆಯನ್ನು ಸಾಧಿಸಲು ಕರಾಮವಿಯೋ ಸಕ್ರಿಯವಾಗಿ ತೊಡಗಿಕೊಂಡಿದೆ.

ಮುಕ್ತ ಮತ್ತು ದೂರ ಕಲಿಕಾ ವ್ಯವಸ್ಥೆ(ODL) ಅಡಿಯಲ್ಲಿ ಉನ್ನತ ಶಿಕ್ಷಣದ ಪ್ರವರ್ತಕ ಮತ್ತು ಪ್ರಥಮ ಕೇಂದ್ರವಾದ ಕರಾಮುವಿಯನ್ನು 1996ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬೇರ್ಪಡಿಸಲಾಯಿತು . ಇದಕ್ಕೂ ಪೂರ್ವದಲ್ಲಿ ಕರಾಮುವಿಯು ಅಂಚೆ ತೆರಪಿನ ಶಿಕ್ಷಣ ಮತ್ತು ನಿರಂತರ ಶಿಕ್ಷಣ ಸಂಸ್ಥೆಯಾಗಿ (ICC&CE) ಕಾರ್ಯನಿರ್ವಹಿಸುತ್ತಿತ್ತು.

ಕರಾಮುವಿಯ ಧ್ಯೇಯವಾಕ್ಯ - " ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ " ಎಂಬುದಾಗಿದೆ . ಈ ಧ್ಯೇಯವಾಕ್ಯವು ಎಲ್ಲಾ ಉನ್ನತ ಶಿಕ್ಷಣ ಆಕಾಂಕ್ಷಿಗಳಲ್ಲಿ , ಉನ್ನತ ಶಿಕ್ಷಣ ತಲುಪದವರಿಗೂ ಶಿಕ್ಷಣವನ್ನು ತಲುಪಿಸುವ ಭರವಸೆಯನ್ನು ನೀಡುತ್ತದೆ . ರಾಷ್ಟ್ರೀಯ ಶಿಕ್ಷಣ ನೀತಿ -1986 ರ ಅನ್ವಯ ಹಾಗೂ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ( MHRD) ನ ಶಿಫಾರಸ್ಸಿನ ಅನುಸಾರವಾಗಿ ಭಾರತ ಸರ್ಕಾರದಿಂದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು.

ದುಡಿಯುವ ವೃತ್ತಿಪರರು, ಕುಟುಂಬಗಳು, ಸಮಾಜದ ಹಿಂದುಳಿದ ವರ್ಗಗಳು , ಮಹಿಳೆಯರು ಮತ್ತು ಹಿಂದುಳಿದ ಪ್ರದೇಶಗಳ ಜನರು, ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದವರು ದೂರ ಶಿಕ್ಷಣದ ಮೂಲಕ ಇಲ್ಲಿ ಪಡೆಯುತ್ತಾರೆ.

25.3-2018 ರ ಸಮೀಕ್ಷೆಯ ಪ್ರಕಾರ( AISHE) ಉನ್ನತ ಶಿಕ್ಷಣಕ್ಕೆ ಒಟ್ಟು ದಾಖಲಾತಿ ಅನುಪಾತದಲ್ಲಿ ( GER ) ಕರ್ನಾಟಕ ರಾಜ್ಯವು ಶೇಕಡ 19% ಸ್ಥಾನವನ್ನು ಹೊಂದಿ ಮುಂಚೂಣಿಯಲ್ಲಿರುವ ಸ್ಥಾನವನ್ನು ಹೊಂದಿದೆ. ಮುಕ್ತ ಮತ್ತು ದೂರ ಶಿಕ್ಷಣದ ವ್ಯವಸ್ಥೆಗೆ ಕರಾಮುವಿಯು ನೀಡಿರುವ ಕೊಡುಗೆ ಅಪಾರವಾದದ್ದು ಮತ್ತು ಮೌಲ್ಯಯುತವಾದದ್ದು . ಇಡೀ ರಾಜ್ಯದಲ್ಲಿ 21 ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿಕೊಂಡು ಇದರ ಜೊತೆಗೆ ಉತ್ತಮ ಸಂಯೋಜಿತ ಕಾಲೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಅಧ್ಯಯನ ಕೇಂದ್ರಗಳಾಗಿ ಗುರುತಿಸಿಕೊಂಡಿದೆ . ರಾಜ್ಯ ಒಟ್ಟು ದಾಖಲಾತಿ ಅನುಪಾತವನ್ನು ಹೆಚ್ಚಿಸುವಲ್ಲಿ ಕರಾಮುವಿಯ ಪಾತ್ರ ಗಮನಾರ್ಹವಾಗಿದೆ .

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕುಲಾಧಿಪತಿಗಳಾಗಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರು ವಿಶ್ವವಿದ್ಯಾನಿಲಯದ ಪದನಿಮಿತ್ತ ಕುಲಾಧಿಪತಿಗಳಾಗಿದ್ದು , ರಾಜ್ಯದ ಉನ್ನತ ಶಿಕ್ಷಣ ಸಚಿವರು ಪದ ನಿಮಿತ್ತ ಸಮ ಕುಲಪತಿಗಳಾಗಿರುತ್ತಾರೆ .ಉಪಕುಲಪತಿಗಳು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ಕಾರ್ಯನಿರ್ವಾಹಕ ಪ್ರಧಾನ ಅಧಿಕಾರಿಯಾಗಿದ್ದಾರೆ . ಇವರ ಸಹಯೋಗದಲ್ಲಿ ಈ ಕೆಳಗಿನ ಆಡಳಿತ ಮಂಡಳಿಯು ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೆ . ಪ್ರಮುಖವಾಗಿ ಅಧಿಕಾರಿಗಳಲ್ಲಿ ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ) , ವ್ಯವಸ್ಥಾಪಕ ಮಂಡಳಿ, ಹಣಕಾಸು ಮಂಡಳಿ, ಡೀನ್ (ಶೈಕ್ಷಣಿಕ) , ಡೀನ್ (ಅಧ್ಯಯನ ಕೇಂದ್ರ) . ಈ ಎಲ್ಲರನ್ನೂ ಒಳಗೊಂಡ ಸುಸರ್ಜಿತ ವ್ಯವಸ್ಥೆಯನ್ನು ಹೊಂದಿರುವ ಸಂಸ್ಥೆಯಾಗಿದೆ .

ಮುಕ್ತ ಮತ್ತು ದೂರ ಶಿಕ್ಷಣದ ವ್ಯವಸ್ಥೆಗೆ (ODL) ಕರಾಮುವಿಯು ನೀಡಿರುವ ಕೊಡುಗೆ ಅಪಾರವಾದದ್ದು ಮತ್ತು ಮೌಲ್ಯಯುತವಾದದ್ದು . ಗುಣಮಟ್ಟದ ಹಾಗೂ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರಾಮುವಿಯು ಕೋರ್ಸ್‌ಗಳು , ಪಠ್ಯಕ್ರಮ , ಅಧ್ಯಯನ ಸಾಮಗ್ರಿಗಳು, ಸಂಪರ್ಕ ತರಗತಿಗಳು, ಪರೀಕ್ಷೆಯ ವಿಧಾನ, ಪರೀಕ್ಷೆಯ ನಡವಳಿಕೆಯಲ್ಲಿ ಪಾರದರ್ಶಕತೆ , ಮೌಲ್ಯಮಾಪನ ಮತ್ತು ಫಲಿತಾಂಶಗಳ ಪ್ರಕಟಣೆ. ಇವುಗಳ ಸುಸಜ್ಜಿತ ಆಯೋಜನೆಯ ಮೂಲಕ ಶ್ಲಾಘನೀಯ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.

ಉತ್ತಮ ಗುಣಮಟ್ಟದ ಸ್ವಯಂ ಕಲಿಕಾ ಸಾಮಗ್ರಿಗಳು (SLM), ಕರಾಮುವಿಯ ಕೇಂದ್ರ ಕಚೇರಿಯಲ್ಲಿ ನಿಮಾರ್ಣಗೊಂಡಿರುವ ಇನ್-ಹೌಸ್- ಸ್ವುಡಿಯೋಗಳಲ್ಲಿ ನಿರ್ಮಾಣವಾಗುವ ಉಪನ್ಯಾಸಗಳು, ರೇಡಿಯೋ ಸಂವಾದಗಳು , ಆಡಿಯೋ ವೀಡಿಯೊ ಉಪನ್ಯಾಸಗಳು ದೇಶದಾದ್ಯಂತ ಮತ್ತು ಹೊರ ರಾಷ್ಟ್ರಗಳಲ್ಲಿಯೂ ಬಹುದೊಡ್ಡ ಸಮುದಾಯದ ಮೆಚ್ಚುಗೆಯನ್ನು ಗಳಿಸಿದೆ. ಎಂಎ , ಎಂಬಿಎ , ಎಂಕಾಂ ಸಮೂಹ ಮಾಧ್ಯಮ ಅಧ್ಯಯನದ ಕ್ಷೇತ್ರಗಳು ಹೆಚ್ಚು ಬೇಡಿಕೆಯನ್ನು ಹೊಂದಿದೆ.

ಕೋರ್ಸ್‌ಗಳಿಗೆ ಪ್ರವೇಶವನ್ನು ಯುಜಿಸಿ-ಡಿಇಬಿ ಮಾರ್ಗಸೂಚಿಗಳ ಪ್ರಕಾರ ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜೂನ್‌ನಲ್ಲಿ ಪ್ರವೇಶವನ್ನು ಆನ್‌ಲೈನ್‌ ನೋಂದಣಿಯನ್ನು ಮಾಡಲಾಗುತ್ತದೆ. ಮುಖ್ಯ ಗ್ರಂಥಾಲಯದಲ್ಲಿ ಇ-ವಿಷಯಕ್ಕೆ ಪ್ರವೇಶ, ಸ್ವಯಂ ಕಲಿಕಾ ಸಾಮಗ್ರಿಗಳು , ಪುಸ್ತಕಗಳು ಮತ್ತು ಜರ್ನಲ್‌ಗಳಿಗೆ ಇ-ಪ್ರವೇಶ ,ಆನ್‌ಲೈನ್ ಉಪನ್ಯಾಸಗಳು ಕರಾಮುವಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರಯೋಜನಗಳಾಗಿವೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಆಡಿಯೋ-ವೀಡಿಯೋ, ವರ್ಚುವಲ್ ಲ್ಯಾಬ್‌ಗಳು, ರೇಡಿಯೋ ಕೇಂದ್ರದ ಮರು-ಸ್ಥಾಪನೆ - 'ಜ್ಞಾನ ವಾಣಿ' ಗಮನಾರ್ಹ ಡಿಜಿಟಲ್ ಉಪಕ್ರಮಗಳಲ್ಲಿ ಸೇರಿವೆ. ಈ ಎಲ್ಲ ಸೌಲಭ್ಯಗಳು 2018-19 ರಿಂದ ಯುಜಿಸಿ ಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಮರು ಗುರುತಿಸಿದಾಗಿನಿಂದ ಪ್ರಾರಂಭಿಸಲ್ಪಟ್ಟಿದೆ.

ಕರಾಮುವಿಯು ತನ್ನ ವಿದ್ಯಾರ್ಥಿಗಳ ಬೆಂಬಲ ಸೇವೆಗಳಿಗಾಗಿ ಪ್ರಸಿದ್ಧವಾಗಿದೆ , ಕೌಶಲ್ಯ ಅಭಿವೃದ್ಧಿ ಕೇಂದ್ರದ ಸ್ಥಾಪನೆ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ, ಕ್ಯಾಂಪಸ್ ನೇಮಕಾತಿ ಡ್ರೈವ್‌ಗಳು, ಆನ್‌ಲೈನ್ ಮತ್ತು ಆಫ್-ಲೈನ್ ಕೌನ್ಸೆಲಿಂಗ್, ಆನ್-ಲೈನ್ ಪ್ರವೇಶ, ಎಲ್ಲಾ ರೀತಿಯ ಶುಲ್ಕ ಪಾವತಿಯ ಡಿಜಿಟಲ್ ಪಾವತಿಗಳು ಕರಾಮುವಿಯ ಕೆಲವು ವಿದ್ಯಾರ್ಥಿ ಪರವಾದ ಇತ್ತೀಚಿನ ಕಾರ್ಯಗಳಾಗಿವೆ.

ಕೋಚಿಂಗ್ ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ವಸತಿ ಸೌಲಭ್ಯಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಂಪರ್ಕ ತರಗತಿಗಳು ಹಸಿರು ಪರಿಸರದಲ್ಲಿರುವುದು, ಆಫ್ಲೈನ್ ಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಒತ್ತಾಸೆ ನೀಡುವುದರಿಂದ ಕರಾಮುವಿಯು ದೂರ ಶಿಕ್ಷಣದ ಮೂಲಕ ಕಲಿಯುವವರಿಗೆ ಅನನ್ಯ ಸೌಲಭ್ಯ ನೀಡುವ ಸಂಸ್ಥೆಯಾಗಿದೆ.

ಟಾಪ್ ಗೆ ಸ್ಕ್ರೋಲ್