ಕುಲಸಚಿವರ ಸಂದೇಶ
- ಮುಖಪುಟ
- ಕುಲಸಚಿವರು

Prof. Naveen Kumar S.K.
ಕುಲಸಚಿವರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ , ಮುಕ್ತಗಂಗೋತ್ರಿ , ಮೈಸೂರು
ಕರಾಮುವಿಯು ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಭೌಗೋಳಿಕವಾಗಿ ಹಿಂದುಳಿದವರ ವರ್ಗಗಳ ಶೈಕ್ಷಣಿಕ ಆಕಾಂಕ್ಷಿಗಳನ್ನು ತಲುಪುವ ದೃಷ್ಟಿಯಿಂದ ಮುಕ್ತ ಮತ್ತು ದೂರಶಿಕ್ಷಣದ (ODL) ದೀರ್ಘ ಮತ್ತು ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಕರೆಸ್ಪಾಂಡೆನ್ಸ್ ಕೋರ್ಸ್ಗಳು ಮತ್ತು ಮುಂದುವರಿದ ಅಂಚೆ ತರಪಿನ ಶಿಕ್ಷಣ ಸಂಸ್ಥೆ (ICC & CE) 1969 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಾರಂಭವಾಯಿತು .ಇದು ದೇಶದ ಆರನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾಲಯ.
NEP-1986 ರ ಅನುಸಾರವಾಗಿ ಸ್ಥಾಪಿಸಲಾದ ಕೇಂದ್ರ ಶೈಕ್ಷಣಿಕ ಸಲಹಾ ಮಂಡಳಿ, MHRD ಯು ಭಾರತ ಸರ್ಕಾರದ ಶಿಫಾರಸುಗಳ ಮೇರೆಗೆ , ಕರಾಮುವಿಯನ್ನು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮತ್ತು ಶೈಕ್ಷಣಿಕ ಕೇಂದ್ರವಾದ ಮೈಸೂರಿನಲ್ಲಿ ಸ್ಥಾಪಿಸಲಾಯಿತು.
ಮುಕ್ತ ಮತ್ತು ದೂರ ಶಿಕ್ಷಣದ ವ್ಯವಸ್ಥೆಗೆ (ODL) ಕರಾಮುವಿಯು ನೀಡಿರುವ ಕೊಡುಗೆ ಅಪಾರವಾದದ್ದು ಮತ್ತು ಮೌಲ್ಯಯುತವಾದದ್ದು . ಗುಣಮಟ್ಟದ ಹಾಗೂ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರಾಮುವಿಯು ಕೋರ್ಸ್ಗಳು , ಪಠ್ಯಕ್ರಮ , ಅಧ್ಯಯನ ಸಾಮಗ್ರಿಗಳು, ಸಂಪರ್ಕ ತರಗತಿಗಳು, ಪರೀಕ್ಷೆಯ ವಿಧಾನ, ಪರೀಕ್ಷೆಯ ನಡವಳಿಕೆಯಲ್ಲಿ ಪಾರದರ್ಶಕತೆ , ಮೌಲ್ಯಮಾಪನ ಮತ್ತು ಫಲಿತಾಂಶಗಳ ಪ್ರಕಟಣೆ. ಇವುಗಳ ಸುಸಜ್ಜಿತ ಆಯೋಜನೆಯ ಮೂಲಕ ಶ್ಲಾಘನೀಯ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.
ಉತ್ತಮ ಗುಣಮಟ್ಟದ ಸ್ವಯಂ ಕಲಿಕಾ ಸಾಮಗ್ರಿಗಳು (SLM), ಕರಾಮುವಿಯ ಕೇಂದ್ರ ಕಚೇರಿಯಲ್ಲಿ ನಿಮಾರ್ಣಗೊಂಡಿರುವ ಇನ್-ಹೌಸ್- ಸ್ವುಡಿಯೋಗಳಲ್ಲಿ ನಿರ್ಮಾಣವಾಗುವ ಉಪನ್ಯಾಸಗಳು, ರೇಡಿಯೋ ಸಂವಾದಗಳು , ಆಡಿಯೋ ವೀಡಿಯೊ ಉಪನ್ಯಾಸಗಳು ದೇಶದಾದ್ಯಂತ ಮತ್ತು ಹೊರ ರಾಷ್ಟ್ರಗಳಲ್ಲಿಯೂ ಬಹುದೊಡ್ಡ ಸಮುದಾಯದ ಮೆಚ್ಚುಗೆಯನ್ನು ಗಳಿಸಿದೆ. ಎಂಎ , ಎಂಬಿಎ , ಎಂಕಾಂ ಸಮೂಹ ಮಾಧ್ಯಮ ಅಧ್ಯಯನದ ಕ್ಷೇತ್ರಗಳು ಹೆಚ್ಚು ಬೇಡಿಕೆಯನ್ನು ಹೊಂದಿದೆ.
ಕೋರ್ಸ್ಗಳಿಗೆ ಪ್ರವೇಶವನ್ನು ಯುಜಿಸಿ-ಡಿಇಬಿ ಮಾರ್ಗಸೂಚಿಗಳ ಪ್ರಕಾರ ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜೂನ್ನಲ್ಲಿ ಪ್ರವೇಶವನ್ನು ಆನ್ಲೈನ್ ನೋಂದಣಿಯನ್ನು ಮಾಡಲಾಗುತ್ತದೆ. ಮುಖ್ಯ ಗ್ರಂಥಾಲಯದಲ್ಲಿ ಇ-ವಿಷಯಕ್ಕೆ ಪ್ರವೇಶ, ಸ್ವಯಂ ಕಲಿಕಾ ಸಾಮಗ್ರಿಗಳು , ಪುಸ್ತಕಗಳು ಮತ್ತು ಜರ್ನಲ್ಗಳಿಗೆ ಇ-ಪ್ರವೇಶ ,ಆನ್ಲೈನ್ ಉಪನ್ಯಾಸಗಳು ಕರಾಮುವಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರಯೋಜನಗಳಾಗಿವೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಆಡಿಯೋ-ವೀಡಿಯೋ, ವರ್ಚುವಲ್ ಲ್ಯಾಬ್ಗಳು, ರೇಡಿಯೋ ಕೇಂದ್ರದ ಮರು-ಸ್ಥಾಪನೆ - 'ಜ್ಞಾನ ವಾಣಿ' ಗಮನಾರ್ಹ ಡಿಜಿಟಲ್ ಉಪಕ್ರಮಗಳಲ್ಲಿ ಸೇರಿವೆ. ಈ ಎಲ್ಲ ಸೌಲಭ್ಯಗಳು 2018-19 ರಿಂದ ಯುಜಿಸಿ ಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಮರು ಗುರುತಿಸಿದಾಗಿನಿಂದ ಪ್ರಾರಂಭಿಸಲ್ಪಟ್ಟಿದೆ.
ಕರಾಮುವಿಯು ತನ್ನ ವಿದ್ಯಾರ್ಥಿಗಳ ಬೆಂಬಲ ಸೇವೆಗಳಿಗಾಗಿ ಪ್ರಸಿದ್ಧವಾಗಿದೆ , ಕೌಶಲ್ಯ ಅಭಿವೃದ್ಧಿ ಕೇಂದ್ರದ ಸ್ಥಾಪನೆ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ, ಕ್ಯಾಂಪಸ್ ನೇಮಕಾತಿ ಡ್ರೈವ್ಗಳು, ಆನ್ಲೈನ್ ಮತ್ತು ಆಫ್-ಲೈನ್ ಕೌನ್ಸೆಲಿಂಗ್, ಆನ್-ಲೈನ್ ಪ್ರವೇಶ, ಎಲ್ಲಾ ರೀತಿಯ ಶುಲ್ಕ ಪಾವತಿಯ ಡಿಜಿಟಲ್ ಪಾವತಿಗಳು ಕರಾಮುವಿಯ ಕೆಲವು ವಿದ್ಯಾರ್ಥಿ ಪರವಾದ ಇತ್ತೀಚಿನ ಕಾರ್ಯಗಳಾಗಿವೆ.
ಕೋಚಿಂಗ್ ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳಲ್ಲಿ ವಸತಿ ಸೌಲಭ್ಯಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಂಪರ್ಕ ತರಗತಿಗಳು ಹಸಿರು ಪರಿಸರದಲ್ಲಿರುವುದು, ಆಫ್ಲೈನ್ ಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಒತ್ತಾಸೆ ನೀಡುವುದರಿಂದ ಕರಾಮುವಿಯು ದೂರ ಶಿಕ್ಷಣದ ಮೂಲಕ ಕಲಿಯುವವರಿಗೆ ಅನನ್ಯ ಸೌಲಭ್ಯ ನೀಡುವ ಸಂಸ್ಥೆಯಾಗಿದೆ.