ಧ್ಯೇಯ ಮತ್ತು ಕಾರ್ಯಯೋಜನೆಗಳು
- ಮುಖಪುಟ
- ಧ್ಯೇಯ ಮತ್ತು ಕಾರ್ಯಯೋಜನೆಗಳು
ಧ್ಯೇಯ
ಕಲಿಕಾರ್ಥಿಯಲ್ಲಿ ಉದಯೋನ್ಮುಖ ಬಹುಶಿಸ್ತುಗಳನ್ನು ಬೆಳಸಿ ವೈಯಕ್ತಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ರೂಪಾಂತರಗೊಳಿಸುವ ಪ್ರಕ್ರಿಯೆಯನ್ನು ರೂಡಿಸಿಕೊಳ್ಳುವಂತೆ ಮಾಡುವುದು . ವಿದ್ಯಾರ್ಥಿಗಳಿಗೆ ಸೂಕ್ತವಾಗಿ ಅನ್ವಯಿಸಬಹುದಾದ ಮತ್ತು ಸುಲಭವಾಗಿ ಅವರಿಗೆ ದೊರೆಯುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುವ ಮುಖೇನ ಭಾರತದಲ್ಲಿರುವ ಅಗ್ರಸ್ಥಾನದ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗುವುದಾಗಿದೆ.
ಕಾರ್ಯಯೋಜನೆಗಳು
ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ಇರುವ ಮಹೋನ್ನತ ಸಂಸ್ಥೆಯಾದ ಕರಾಮುವಿಯು ಈ ಕೆಳಗಿನ ಗುರಿಗಳನ್ನು ಹೊಂದಿದೆ :
•ಮುಕ್ತ ಮತ್ತು ದೂರ ಶಿಕ್ಷಣವನ್ನು ಉತ್ಕೃಷ್ಟಗೊಳಿಸುವಲ್ಲಿ ಬೋಧನೆ, ಸಂಶೋಧನೆ, ಸೃಜನಶೀಲತೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗಳನ್ನು ಅಳವಡಿಸಿಕೊಂಡು ಕಲಿಕಾ ವಾತಾವರಣವನ್ನು ಉತ್ತೇಜಿಸುವ ಗುರಿಗಳನ್ನು ಹೊಂದಿದೆ .
• ರಾಜ್ಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಸುಸ್ಥಿರ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಕಲಿಯುವವರ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸನ್ನು ಉತ್ತೇಜಿಸುವುದು.
• ವಿಶ್ವವಿದ್ಯಾನಿಲಯಗಳ ಮಾನ್ಯತೆ ನೀಡುವ ನಿಯೋಗಗಳ ಅನುಸಾರ ನೀಡಿರುವ ಗುಣಮಟ್ಟಗಳನ್ನು ಮತ್ತು ಮಾನದಂಡಗಳನ್ನು ಸೂಕ್ತವಾಗಿ ಪೂರೈಸುವುದರ ಜೊತೆಗೆ ಉತ್ತಮ ಶ್ರೇಯಾಂಕವನ್ನು ಪಡೆದು ಮೊದಲ ಐದು ವಿಶ್ವವಿದ್ಯಾನಿಲಯಗಳಲ್ಲಿ ಅರ್ಹತೆ ಪಡೆಯುವುದು.
• ರಾಷ್ಟ್ರೀಯ ದಾಖಲಾತಿ ಅನುಪಾತಕ್ಕೆ ಉತ್ತಮವಾದ ಮೆಚ್ಚುಗೆ ನೀಡಲು ಸೂಕ್ತವಾಗಿರುವ ಕಲಿಕಾ ವಾತಾವರಣವನ್ನು ಒದಗಿಸುವುದರೊಂದಿಗೆ ಪ್ರಾದೇಶಿಕ ಕೇಂದ್ರಗಳನ್ನು ಮತ್ತು ಉತ್ತಮ ಕಲಿಕಾ ಕೇಂದ್ರಗಳ ಜಾಲವನ್ನು ಸುಗಮಗೊಳಿಸಲು, ಬಲಪಡಿಸಲು ಮತ್ತು ವಿಸ್ತರಿಸಲು ಕ್ರಮವಹಿಸುವುದು.
• ರಾಷ್ಟ್ರೀಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲು ಅತ್ಯುತ್ತಮ ಕೌಶಲ್ಯ, ಯೋಗ್ಯತೆ, ಸಾಮರ್ಥ್ಯ ಸ್ವಾಧೀನಗೊಳಿಸುವ ಪ್ರಕ್ರಿಯೆ ಮತ್ತು ಆತ್ಮವಿಶ್ವಾಸದೊಂದಿಗೆ ಸ್ಪರ್ಧಾತ್ಮಕ ಕಾರ್ಯ ಪಡೆಯನ್ನು ಉತ್ಪಾದಿಸುವ ಪ್ರಕ್ರಿಯೆ ರೂಡಿಸಿಕೊಳ್ಳುವುದು.
•ಜೀವನದಲ್ಲಿ ನೈತಿಕತೆ ಮತ್ತು ಮೌಲ್ಯಗಳನ್ನು ರೂಢಿಸಿಕೊಂಡು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪರಿಸರ, ಸಂಸ್ಕೃತಿಯ ರಕ್ಷಣೆ, ಸಾಮಾಜಿಕ ಯೋಗಕ್ಷೇಮಕ್ಕಾಗಿ ಆಂತರಿಕ ಅಭಿಪ್ರಾಯವನ್ನು ಉತ್ತೇಜಿಸುವುದು ಹಾಗೂ ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಸಂವಿಧಾನ ಬದ್ಧತೆಗಳ ರಕ್ಷಣೆ ಹೊಂದುವುದಕ್ಕಾಗಿ ಕಾರ್ಯನಿರ್ವಹಿಸುವುದು.